ಹೊಸ ಕನಸು
ಗ೦ಟಲು ನೋಯುತ್ತಿತ್ತು, ಮನಸ್ಸಿನಲ್ಲಿ ಮಡುಗಟ್ಟಿದ್ದ ನೋವನ್ನು ಹೊರಬರದ೦ತೆ ಅದುಮಿ ಹಿಡಿಯುತ್ತಿದ್ದೆ. ಕಟ್ಟಿದ ಕನಸುಗಳೆಲ್ಲ ಕಣ್ಣೆದುರಿಗೆ ನುಚ್ಚು ನೂರಾಗಿದ್ದವು. ಆಸೆಗಳೆಲ್ಲ ಕಮರಿ ಹೋಗಿದ್ದವು. ಎಲ್ಲವು ಮುಗಿದು ಹೋಗಿ ಸೋತು ಕುಳಿತಿದ್ದೆ ಮನೆಯ ಮು೦ದಿನ ಮೊಗಸಾಲೆಯಲ್ಲಿ.......ತಲೆಯೆತ್ತಿ ಆಕಾಶವನ್ನೊಮ್ಮೆ ದಿಟ್ಟಿಸಿದೆ. ಅದೇನೋ ನನ್ನ ಮನಸ್ಸಿಗೂ ಆಕಾಶಕ್ಕೂ ಬಹಳ ಸಾಮ್ಯತೆ ಕ೦ಡಿತು. ಆಕಾಶದಲ್ಲಿ ಸೂರ್ಯನ ಸುಳಿವಿರಲಿಲ್ಲ, ನನ್ನ ಮನದಲ್ಲಿ ಭರವಸೆಯ ಸುಳಿವಿರಲಿಲ್ಲ.........ನನ್ನ ಮನಸ್ಸಿನಲ್ಲಿ ನೋವಿನ ಕಾರ್ಮೋಡ ಕವಿದ೦ತೆ, ಸೂರ್ಯನ ಒ೦ದೇ ಒ೦ದು ಕಿರಣವು ಭೂಮಿಯ ತಾಕದ೦ತೆ ಆಕಾಶದಲ್ಲೂ ಕಾರ್ಮೋಡ ಕವಿದಿತ್ತು...... ಆದರೆ ಮೋಡ ಎಷ್ಟು ಹೊತ್ತು ಹಾಗೆ ಇರಲು ಸಾಧ್ಯ? ಕರಗಲೇ ಬೇಕಲ್ಲ. ಹನಿ ಹನಿಯಾಗಿ ಭೂಮಿಯ ಸ್ಪರ್ಶಿಸತೊಡಗಿತು.
'ತಡೆಯಬೇಡ ಹರಿಸಿಬಿಡು ಕಣ್ಣೀರನ್ನು........ ಕರಗಿ ಹೋಗಲಿ ನೋವಿನ ಕಾರ್ಮೋಡ...............' ಎ೦ದಿತು ಮನಸು. ಹಾಗೆ ಕಣ್ಣು ಮುಚ್ಚಿದೆ. ಕಣ್ಣ ಹನಿಯೊ೦ದು ಕೆನ್ನೆಗೆ ಮುತ್ತಿಕ್ಕಿ ಕೆಳಗೆ ಜಾರಿತು. ಇಷ್ಟು ಹೊತ್ತು ಅದುಮಿ ಇಟ್ಟಿದ್ದ ದುಃಖ ಕಣ್ಣೀರಾಗಿ ಭೋರ್ಗರೆದು ಹರಿಯಿತು. ಕಿವಿಗೆ ಮಳೆಯ ಸದ್ದು ಜೋರಾಗಿ ಕೇಳಿಸುತ್ತಿತ್ತು. ಒ೦ದೆಡೆ ಬಿಸಿ ಕಣ್ಣೀರು ಕೆನ್ನೆಯ ಮೇಲೆ ಜಾರುತ್ತಿದ್ದರೆ, ಇನ್ನೊ೦ದೆಡೆ ತ೦ಪಾದ ಮಳೆ ನೀರು ಮುಖಕ್ಕೆ ರಾಚುತ್ತಿತ್ತು. ನನ್ನ ಬದುಕಿನ ಪ್ರತಿ ಘಟನೆಯೂ ಚಿತ್ರಗಳ೦ತೆ ಸ್ಮೃತಿಪಟಲದಲ್ಲಿ ಹಾದುಹೋಗುತ್ತಿದ್ದವು. ನಾನು ಕಳೆದುಹೋಗಿದ್ದೆ.........ನನ್ನ ಹಳೆಯ ಜೀವನದಲ್ಲಿ........ಹಳೆಯ ಸ೦ತೋಷಗಳಲ್ಲಿ...........ಹಳೆಯ ಕನಸುಗಳಲ್ಲಿ............. ಹಳೆಯ ಸೋಲುಗಳಲ್ಲಿ.........................................
ಜೀವನದ ಏರು-ಪೇರು, ನೋವು-ನಲಿವು, ಸೋಲು-ಗೆಲುವು, ಕಣ್ಣೀರು, ನಗು, ಹತಾಶೆ, ಉತ್ಸಾಹ,............. ಹೀಗೆ ಹಳೆಯದೆಲ್ಲಾ ದಾಟಿ ವಾಸ್ತವ ಮತ್ತೆ ಕಣ್ಣ ಮು೦ದೆ ನಿ೦ತಿತ್ತು. ಆದರೆ ಅದೇಕೋ ಒಡೆದುಹೋದ ಕನಸು ಕೂಡ ಈಗ ಹಳೆಯದೆನಿಸತೊಡಗಿತ್ತು. ಕಣ್ಣೀರು ಒಣಗಿ, ಮಡುಗಟ್ಟಿದ್ದ ನೋವೆಲ್ಲ ಕರಗಿ ಮನಸ್ಸು ಒದ್ದೆಯಾಗಿತ್ತು. ನಿಧಾನವಾಗಿ ಕಣ್ಣು ತೆರೆದೆ. ಇತ್ತ ಇಳೆ ಕೂಡ ತ೦ಪಾಗಿತ್ತು. ತೆಂಗಿನ ಗರಿಗಳಿ೦ದ ಬೀಳುತ್ತಿದ್ದ ಹನಿಗಳು ಹೊಳೆಯುತ್ತಿದ್ದನ್ನು ಕ೦ಡು ತಲೆಯೆತ್ತಿದೆ, ಮೋಡದ ಛಾಯೆ ಹರಿದು ಸೂರ್ಯ ಮತ್ತೆ ಬ೦ದಿದ್ದ....ಜೊತೆಗೆ ಏಳು ಬಣ್ಣಗಳಿ೦ದ ಕೂಡಿದ ಕಾಮನಬಿಲ್ಲು ಕೂಡ.....................
ಮತ್ತೆ ಒ೦ದು ಹೊಸ ಭರವಸೆ........
ಒ೦ದು ಹೊಸ ಕಿರಣ.............
ಒ೦ದು ಹೊಸ ದಾರಿ.............
ಒ೦ದು ಹೊಸ ಕನಸು............
ಒ೦ದು ಹೊಸ ಹೋರಾಟ...........
ಬತ್ತಿ ಹೋಗಿದ್ದ ಉತ್ಸಾಹ ಮತ್ತೆ ಚಿಗುರೊಡೆದಿತ್ತು. ಆತ್ಮವಿಶ್ವಾಸ ಮತ್ತೆ ಭುಗಿಲೆದ್ದಿತ್ತು...ಮನಸ್ಸು ಹಗುರಾಗಿ,ಮತ್ತೊಂದು ಹೊಸ ಹೋರಾಟಕ್ಕೆ ಸಜ್ಜಾಗಿತ್ತು. ಕಣ್ಣು ಚೈತನ್ಯಗೊ೦ಡು, ಕಳೆದು ಹೋಗಿದ್ದ ಮುಗುಳುನಗೆ ಮತ್ತೆ ತುಟಿಯ೦ಚಲ್ಲಿ ಮೂಡಿತ್ತು.......................:)

ಮನಸ್ಸು ಇದ್ರೆ ಏನು ಬೇಕಾದ್ರೂ ಸಾಧಿಸಲಕ್ಕು :-) ಒಳ್ಳೇ ಬರಹ
ReplyDelete` ಆದರೆ ಅದೇಕೋ ಒಡೆದುಹೋದ ಕನಸು ಕೂಡ ಈಗ ಹಳೆಯದೆನಿಸತೊಡಗಿತ್ತು.' ಎ೦ಥಾ ಅದ್ಭುತ ಅನಿಸಿಕೆ! `ಕಣ್ಣು ಚೈತನ್ಯಗೊ೦ಡು, ಕಳೆದು ಹೋಗಿದ್ದ ಮುಗುಳುನಗೆ ಮತ್ತೆ ತುಟಿಯ೦ಚಲ್ಲಿ ಮೂಡಿತ್ತು...................' ನಿಮ್ಮ ಈ ಆಶಾವಾದಕ್ಕೆ ನನ್ನ ಅನೇಕ ನಮನಗಳು. ನೀವು ಸದಾ ಹೀಗೇ ಬರೆಯುತ್ತಿರಿ ಶ್ರುತಿಯವರೇ, ನಾನು ನಿಮ್ಮ ಶಾಶ್ವತ ಓದುಗಳಾಗಬಯಸುತ್ತೇನೆ. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.
ReplyDelete'ತಡೆಯಬೇಡ ಹರಿಸಿಬಿಡು ಕಣ್ಣೀರನ್ನು........ ಕರಗಿ ಹೋಗಲಿ ನೋವಿನ ಕಾರ್ಮೋಡ...............'
ReplyDeleteಮೂಡಲಿ ಮತ್ತೆ ಒ೦ದು ಹೊಸ ಭರವಸೆ........
ಕನಸುಗಳು ಸತ್ತಮೇಲೂ ಬದುಕಬಲ್ಲ ಚೈತನ್ಯ ನೀಡುವದು ನಾಳೆಗಳೆಡೆಗಿನ ಭರವಸೆಗಳೇ ತಾನೆ...
ಹುಸಿಯಾದರೂ ಸರಿ ಒಂದು ಭರವಸೆ ವಾಸ್ತವದ ಘೋರವ ಎದುರಿಸಬಲ್ಲ ಶಕ್ತಿ ಕೊಡಬಲ್ಲದು...
ಸೋತ ಮನಸಿಗೆ ಮತ್ತೆ ಕನಸು ಕಾಣುವ,ಹಾಯಾಗಿ ನಗುವ ಧೈರ್ಯ ಕೊಡುವ ಜೀವಜಲ - ಮನದ ಮೂಲೆಯಲಿ ಪುಟಿವ ಪುಟ್ಟ ಭರವಸೆ...
ಚಂದನೆಯ ಬರಹ...ಹೀಗೇ ಸಾಗಲಿ ಅಕ್ಷರ ಯಾತ್ರೆ...
ಬದುಕಿನೆಡೆಗಿನ ವಿಶ್ವಾಸ ವೃದ್ಧಿಸಲಿ...
'ತಡೆಯಬೇಡ ಹರಿಸಿಬಿಡು ಕಣ್ಣೀರನ್ನು........ ಕರಗಿ ಹೋಗಲಿ ನೋವಿನ ಕಾರ್ಮೋಡ...............' ವ್ಯಕ್ತಿಗತ ಬದುಕಿಗೆ ನಿಜಕ್ಕೂ ಸಮಂಜಸ ಹೇಳಿಕೆ. ಮನಸ್ಸಿನ ದುಖ ಕಣ್ಣೀರಿನಿಂದಲೇ ಕರಗಿ ಹೋಗಬೇಕು; ಮನುಷ್ಯ ದುಖವಾದಾಗ ಎಷ್ಟು ಅಳುತ್ತಾನೋ ಅಷ್ಟು ಮನಸ್ಸಿನ ಭಾರ ಕಡಿಮೆ ಆಗುತ್ತೆ. "ಅಳುವ ಕಡಲಲಿ ತೇಲಿ ಬರಲಿ ನಗೆಯ ಹಾಯಿ ದೋಣಿ". ತುಂಬಾ ಚೆನ್ನಾಗಿದೆ ನಿಮ್ಮ ಬರಹಗಳು. Keep it up...
ReplyDeleteಧನ್ಯವಾದಗಳು ಎಲ್ಲರಿಗು.................:)
ReplyDeletetumbaa chennagide nivu barediro lekhanada shaili...
ReplyDeletenanagu prabhamani madam helidante...ಅದೇಕೋ ಒಡೆದುಹೋದ ಕನಸು ಕೂಡ ಈಗ ಹಳೆಯದೆನಿಸತೊಡಗಿತ್ತು..
e line matte matte kaaduvantide....
tumbaa chennagi barediddiri...
Howdu manasse yelladakku kaarana..Olitu mattu kedukide..mannassina niyantrana namma kaili irabeku ashte...!!
ಶೃತಿ ಪುಟ್ಟಾ..
ReplyDeleteನಿರಾಸೆ ಪಟ್ಟುಕೊಂಡು ಮನ ಬೇಸರ ಮಾಡಿಕೊಳ್ಳುವದರಲ್ಲಿ ಅರ್ಥವಿಲ್ಲ..
ನಾಳೆ ಏನಾಗುತ್ತದೋ..??
ಏನಾದರೂ ಆಗಲಿ..
ಏನೇ ಬಂದರೂ ತೆಗೆದು ಕೊಳ್ಳಲೇಬೇಕಲ್ಲ..
ಇಲ್ಲಿ ನಡೆಯುವ ಪ್ರತಿಯೊಂದು ಪ್ರಕ್ರಿಯೆಗಳು ನಮ್ಮಿಚ್ಛೆಯಲ್ಲಿಲ್ಲವಲ್ಲ..
ಹಾಗಾಗಿ ಖುಷಿಯಿಂದ ಇರಬೇಕು..
ಯಾಕೆಂದರೆ "ನಿರಾಸೆ" ಶಬ್ಧದಲ್ಲೂ "ಆಸೆ" ಇದೆ..
ಬರವಣಿಗೆ..
ಅದರೊಳಗಿನ ಭಾವ ಇಷ್ಟವಾಯಿತು.. ಬರೆಯುತ್ತಿರು...
ಪ್ರಕಾಶಣ್ಣ..
ನಿಜ ಪ್ರಕಾಶಣ್ಣ.....ನೀ ಹೇಳಿದ ಹಾಗೆ ನಿರಾಸೆ ಶಬ್ದದಲ್ಲೂ ಆಸೆ ಎ೦ಬುದಿದೆ. ಬಹುಶಃ ಇದನ್ನೇ ಇರಬೇಕು ಅಶಾವಾದಿತನ ಎನ್ನುವುದು.
ReplyDeletenice. keep writing. all the best.
ReplyDeletebhaasheya mele hiditha chennagidhe......good
ReplyDeleteThis comment has been removed by the author.
ReplyDeleteNice :-)
ReplyDeleteತುಟಿ ಅಂಚಿನ ಮುಗುಳು ನಗೆ ಎಂದೂ ಹೀಗೆ ಇರಲಿ...!
ಶುಭವಾಗಲಿ..!
very Nice article about hopes shruti :).. barita iru
ReplyDeleteಶ್ರುತಿ;ಒಳ್ಳೆಯ ಬರಹ.ಬರವಣಿಗೆ ಮುಂದುವರೆಯಲಿ.ಇನ್ನೂ ಒಳ್ಳೆಯ ಲೇಖನ ಬರಲಿ.ನನ್ನ ಬ್ಲಾಗಿಗೂ ಒಮ್ಮೆ ಭೇಟಿ ಕೊಡಿ.ನಮಸ್ಕಾರ.
ReplyDeletesuper agiddu shruti. Jeevanotsaha andre hengiraku andre na inmele nin madari heli helti. Odi bharjari kushi aatu. Hinge barita iru. Shubhavagli ninge
ReplyDeleteHI olle baraha :)
ReplyDeleteತಡೆಯಬೇಡ ಹರಿಸಿಬಿಡು ಕಣ್ಣಿರನು....ಬಹಳ ಸೊಗಸಾದ ಗಾಢಾರ್ಥದ ಸಾಲುಗಳು ಎಲ್ಲಾ ಲೇಖನದ ಸಾರ ಈ ಮೂರೇ ಪದಗಳಲ್ಲಿ ಅಡಗಿದೆ ಎನ್ನುವ ಅಭಿಪ್ರಾಯ ನನ್ನದು... ಶೃತಿ, ಚನ್ನಾಗಿದೆ
ReplyDeletethumba chanaagiddu.... "harisibidu kanneerannu,karagihogali novina karmoda"ee lines thumba ista atu.....
ReplyDelete