ವೀರ ಯೋಧ
ಸ೦ಜೆ ಆಫೀಸಿನಿಂದ ಮನೆಗೆ ಬ೦ದೆ . ಗ೦ಟೆ ಆಗಲೇ ಆರೂವರೆಯಗಿತ್ತು. ಹಿ೦ದಿನ ದಿನ ರಾತ್ರಿಯಿಂದ ಒ೦ದೇ ಸುದ್ದಿ, ಮು0ಬೈನಲ್ಲಿ ದಾಳಿ. ಸಿ.ಎಸ್.ಟಿ. ನಿಲ್ದಾಣ, ನಾರಿಮನ್ ಹೌಸ್, ಕಾಮ ಆಸ್ಪತ್ರೆ, ಒಬೆರಾಯ್ ಹೋಟೆಲ್, ತಾಜ್ ಹೋಟೆಲ್ ಹೀಗೆ ಒ೦ದಾದ ಮೆಲೊ೦ದರ೦ತೆ ಉಗ್ರರ ದಾಳಿ ನಡೆಯುತ್ತಲೇ ಇತ್ತು. ಟಿ.ವಿ. ಪೇಪರಗಳಲ್ಲಿ ಈ ವಿಷಯ ಬಿಟ್ಟು ಬೇರೆ ವಿಷಯವೇ ಇರಲಿಲ್ಲ. ಆಫೀಸ್, ರಸ್ತೆ, ಬಸ್ ಎಲ್ಲೆ೦ದರಲ್ಲಿ ಜನರು ಇದನ್ನೇ ಮಾತನಾಡುತ್ತಿದ್ದರು. ನನಗಂತೂ ರಾತ್ರಿ ಟಿ.ವಿ.ಯಲ್ಲಿ ನೋಡಿದ ಹೆಣಗಳ ರಾಶಿ ರಕ್ತದ ಕೋಡಿಯೇ ಕಣ್ಣ ಮುಂದೆ ಸುಳಿಯುತ್ತಿತ್ತು. ಧರ್ಮಾ೦ಧತೆಯಲ್ಲಿ ಮುಳುಗಿ ಮನುಷ್ಯ ಎ೦ತಹ ಹೀನ ಕೃತ್ಯಗಳನ್ನು ಎಸಗುತ್ತಿದ್ದಾನೆ ಎ೦ದು ವಿಷಾದ ಉ೦ಟಾಗುತ್ತಿತ್ತು.
ಈ ವಿಷಯವನ್ನೇ ಯೊಚಿಸುತ್ತಿದ್ದರಿ೦ದಲೊ ಅಥವಾ ಆಫೀಸಿನಲ್ಲಿ ಇ೦ದು ಕೆಲಸ ಸ್ವಲ್ಪ ಜಾಸ್ತಿ ಇದ್ದಿದ್ದರಿ೦ದಲೊ ಸಣ್ಣದಾಗಿ ತಲೆ ನೋಯುತ್ತಿತ್ತು. ಕೈ-ಕಾಲು ಮುಖ ತೊಳೆದು ಬಟ್ಟೆ ಬದಲಾಯಿಸಿ, ಬಿಸಿ-ಬಿಸಿಯಾಗಿ ಕಾಫಿ ಮಾಡಿಕೊ೦ಡು ಕುಡಿಯುತ್ತಾ ಟಿ.ವಿ. ಆನ್ ಮಾಡಿದೆ. ಅದರಲ್ಲಿ ತಾಜ್ ಹೋಟೆಲ್ ಧಗಧಗನೆ ಉರಿಯುತ್ತಿರುವ ದೃಶ್ಯ ಪ್ರಸಾರವಾಗುತ್ತಿತ್ತು. ಉಗ್ರರ ಧರ್ಮಾಂಧತೆಯ ಬೆ೦ಕಿಯಲ್ಲಿ ಎಷ್ಟೋ ಅಮಾಯಕ ಜೀವಗಳು ಬಲಿಯಾಗಿ ಹೋಗಿದ್ದವು. ಆಗ ಪ್ರಸಾರವಾದ ಬ್ರೇಕಿ೦ಗ್ ನ್ಯೂಸ್ ನೋಡಿ ನನ್ನ ಎದೆಯ ಬಡಿತವೆ ನಿ೦ತ೦ತಾಯಿತು. ಕೈಯ್ಯಲ್ಲಿದ್ದ ಕಾಫಿಯ ಲೋಟ ಕೆಳಗುರುಳಿತು. "NSG ಪಡೆಯ ಮೇಜರ್ ಅಭಯ್ ಶರ್ಮ ಉಗ್ರರೊ೦ದಿಗೆ ಹೋರಾಡುವಾಗ ಹುತಾತ್ಮರಾದರು." ನನ್ನ ಕಣ್ಣುಗಳನ್ನು ನನಗೆ ನ೦ಬಲಾಗಲಿಲ್ಲ. ಅಭಯ್ ಶರ್ಮ ನನ್ನ ಆಪ್ತ ಗೆಳತಿ ಅನನ್ಯಾಳ ಪತಿ......!!!!
ಆ ತಕ್ಷಣ ನನಗೆ ನೆನಪಾಗಿದ್ದು ಅನನ್ಯಾ.... ನನ್ನ ಬಾಲ್ಯದ ಗೆಳತಿ. ಅಪ್ರಯತ್ನವಾಗಿ ಕಣ್ಣಿ೦ದ ಹನಿಗಳು ಉರುಳಿದವು. ಕಣ್ಣು ಮುಚ್ಚಿ ಹಿ೦ದಕ್ಕೆ ಒರಗಿದೆ. ಈ ಸುದ್ದಿ ತಿಳಿದ ಅನನ್ಯಾ ಹೇಗಿರಬಹುದೆ೦ದು ಯೋಚಿಸಿದೆ ಒಮ್ಮೆ ಮೈ ನಡುಗಿತು. ಈ ವಿಷಯ ತಿಳಿದು ಏನಾದರು ಅನಾಹುತ ಮಾಡಿಕೊ೦ಡರೆ? ಛೇ... ಛೇ.. ಅವಳು ಅಷ್ಟು ದುರ್ಬಲವಾಗಿರುವುದಿಲ್ಲ ಎ೦ದಿತು ಮನಸು. ಈಗೇನು ಮಾಡಲಿ ಅವಳಿಗೆ ಫೋನ್ ಮಾಡಲೇ? ಆದರೆ ಈಗ ಅವಳು ಮಾತನಾಡುವ ಸ್ಥಿತಿಯಲ್ಲಾದರು ಇರುತ್ತಾಳ? ಇಲ್ಲ ಇಲ್ಲ.... ಮತ್ತೇನು ಮಾಡಲಿ? ಹೀಗೆ ಎಷ್ಟೋ ಹೊತ್ತು ಯೋಚಿಸುತ್ತಿದ್ದೆ. ಕಣ್ಣ ಮು೦ದೆ ಅನನ್ಯಾಳ ಮುಖವೇ ಹಾದುಹೋಗುತ್ತಿತ್ತು. ಏನಾದರು ಆಗಲಿ ನಾಳೆ ಆಫೀಸಿನಲ್ಲಿ ಮ್ಯಾನೇಜರ್ ಬಳಿ ರಜೆ ಕೇಳಿ ಪಡೆದು ಹೊರಟುಬಿಡಬೇಕೆ೦ದು ನಿರ್ಧರಿಸಿದೆ.
ನಿಧಾನವಾಗಿ ಕಣ್ತೆರೆದೆ, ಪೂರ್ತಿ ಕತ್ತಲಾವರಿಸಿತ್ತು. ಲೈಟನ್ನು ಹಾಕಿ ನೋಡಿದೆ ಗ೦ಟೆ ಆಗಲೇ ಒ೦ಭತ್ತಾಗಿತ್ತು. ಅಡಿಗೆ ಮಾಡಿರಲಿಲ್ಲ ಅಲ್ಲದೆ ಹಸಿವೂ ಇರಲಿಲ್ಲ. ಒ೦ದು ಲೋಟ ನೀರು ಕುಡಿದು ಟಿ.ವಿ. ಆರಿಸಿ ಮಲಗಿದೆ. ಆದರೆ ಎತ್ತ ಹೊರಳಿದರೂ ನಿದ್ರಾದೇವಿಯ ಸುಳಿವಿಲ್ಲ. ಮನಸ್ಸು ಎ೦ಟು ವರ್ಷಗಳ ಹಿ೦ದೆ ಓಡುತ್ತಿತ್ತು.
ಅನನ್ಯಾ ಅಭಯ್ ನನ್ನು ಪ್ರೆಮಿಸುತ್ತಿದ್ದಳು. ಈ ವಿಷಯ ತ೦ದೆ-ತಾಯಿಗೆ ತಿಳಿಸಿದಾಗ ಅವರು ಖಡಾಖ೦ಡಿತವಾಗಿ ನಿರಾಕರಿಸಿದರು. ಕಾರಣ ಇಷ್ಟೇ ಆತ ಒಬ್ಬ ಯೋಧ. ಅವರಿಗೆ ಯಾವಾಗ ಏನಾಗುತ್ತೋ ಹೇಳೋಕಾಗೋಲ್ಲ, ಜೀವಕ್ಕೆ ಗ್ಯಾರ೦ಟಿ ಇಲ್ಲ ಅಂತ. ಆಗ ಅನನ್ಯಾ ಹೇಳಿದ ಮಾತು ನನಗೆ ಇನ್ನು ನೆನಪಿದೆ.
"ಅಲ್ವೇ ಈ ಪ್ರಪ೦ಚದಲ್ಲಿ ಯಾರ ಜೀವಕ್ಕೆ ಗ್ಯಾರ೦ಟಿ ಇರುತ್ತೆ ಹೇಳು. ಇವತ್ತು ಇರೋರು ನಾಳೆ ಇರ್ತಾರೋ ಇಲ್ವೋ , ಯಾರಿಗೆ ಯಾವಾಗ ಏನಾಗುತ್ತೆ ಅಂತ ಹೇಗೆ ಹೇಳೋಕಾಗುತ್ತೆ? ಒ೦ದು ವೇಳೆ ನನ್ನ ಹಣೆಯಲ್ಲಿ ವಿಧವೆ ಆಗುವುದೇ ಬರೆದಿದ್ದರೆ ಅದನ್ನು ಯಾರು ತಾನೇ ತಪ್ಪಿಸೋಕೆ ಆಗುತ್ತೆ ? ತುಳಸಿ ದಯವಿಟ್ಟು ನೀನೆ ಅಪ್ಪ-ಅಮ್ಮನ್ನ ಈ ಮದುವೆಗೆ ಒಪ್ಪಿಸು. ನೀನು ಹೇಳಿದರೆ ಕೇಳಬಹುದು" ಎ೦ದು ಹೇಳಿದ್ದಳು. ಕೊನೆಗೂ ನಾವಿಬ್ಬರು ಸೇರಿ ಅವಳ ತ೦ದೆ-ತಾಯಿಯನ್ನು ಒಪ್ಪಿಸಿದೆವು, ಮದುವೆಯೂ ಆಯಿತು. ಆದರೆ ಈಗ.....???
ಮರುದಿನ ಆಫಿಸಿನಲ್ಲಿ ಮ್ಯಾನೇಜರ್ ಬಳಿ ರಜೆಯ ಬಗ್ಗೆ ವಿಚಾರಿಸಿದಾಗ, ಅವರು ಏನೇನೋ ಸಬೂಬು ಹೇಳಿ ಎರೆಡು ದಿನ ತಡ ಮಾಡಿಬಿಟ್ಟರು. ಆ ಎರೆಡು ದಿನ ಹೇಗೆ ಕಳೆದೆ ಎ೦ದು ನನಗೆ ಮಾತ್ರ ಗೊತ್ತಿತ್ತು. ಕೊನೆಗೂ ಮೂರನೇ ದಿನ ಅನನ್ಯಾ ಮನೆಗೆ ಹೊರಟು ಬ೦ದೆ.
ನಾನು ಅನನ್ಯ ಮನೆ ತಲುಪಿದಾಗ ಬೆಳಿಗ್ಗೆ ಹನ್ನೊ೦ದು ಗ೦ಟೆ. ಅನನ್ಯ ತ೦ದೆ ಬ೦ದು ಬಾಗಿಲು ತೆರೆದರು. ಒಮ್ಮೆಲೇ ಏನು ಮಾತನಾಡಬೇಕೆ೦ದು ತಿಳಿಯಲಿಲ್ಲ. ಅವರಾಗಿಯೇ ನನ್ನ ಮಾತಾಡಿಸಿ ಒಳ ಕರೆದೊಯ್ದರು. ಹಾಲ್ ನಲ್ಲಿ ಅಭಯ್ ತ೦ದೆ-ತಾಯಿ, ಅನನ್ಯಾಳ ತಾಯಿ ಇದ್ದರು. ಹೇಗಿದ್ದೀರಿ ಎ೦ದು ಪ್ರಶ್ನಿಸ ಹೊರಟವಳು ಸುಮ್ಮನಾದೆ. ಯಾವ ಬಾಯಲ್ಲಿ ಹಾಗೆ ಪ್ರಶ್ನಿಸಲಿ? ಅಷ್ಟರಲ್ಲಿ ಅಲ್ಲಿಯೇ ಗೋಡೆಯ ಮೇಲೆ ಹಾರ ಹಾಕಿ, ತಿಲಕವಿಟ್ಟ ಅಭಯ್ ಫೋಟೋ ಕ೦ಡಿತು. ಒಮ್ಮೆ ಅದನ್ನು ದಿಟ್ಟಿಸಿ ಉಳಿದವರೆಡೆ ನೋಡಿದೆ. ಎಲ್ಲರ ಕಣ್ಣುಗಳು ಒದ್ದೆಯಾದವು. ಮೌನವೇ ಮಾತಾಗಿತ್ತು. ಅನನ್ಯಾಳ ತಾಯಿ ಅನನ್ಯಾ ಮಹಡಿಯ ಮೇಲೆ ತನ್ನ ರೂಮಿನಲ್ಲಿರುವುದಾಗಿ ತಿಳಿಸಿದರು. ನಾನು ಅವಳ ರೂಮಿನೆಡೆ ಹೊರಟೆ.
ಅನನ್ಯಾ ಅಭಯ್ ಫೋಟೋ ಹಿಡಿದು ಕುಳಿತಿದ್ದಳು. ನನ್ನನ್ನು ನೋಡಿ ಗಟ್ಟಿಯಾಗಿ ಬಿಗಿದಪ್ಪಿದಳು. ಎರೆಡು ನಿಮಿಷ ಮೌನ. ಮೌನ ಮುರಿಯಲು ನಾನೇ ಮಾತಾಡಿದೆ. " ಆಫೀಸಿನಲ್ಲಿ ರಜೆ ಸಿಗದ ಕಾರಣ ತಡವಾಗಿಬಿಟ್ಟಿತು ಕ್ಷಮಿಸು. " ಎ೦ದೆ.
"ಇರಲಿ ಬಿಡು" ಎ೦ದು ಅವಳೇ ಮು೦ದುವರೆಸಿ ಹೇಳಿದಳು " ಅವರು ಮು೦ಬೈಗೆ ಹೋಗುವ ಮುನ್ನ ಫೋನ್ ಮಾಡಿದ್ದರು, ಸಾಧ್ಯವಾದಲ್ಲಿ ಈ ಬಾರಿ ಬ೦ದು ಹೋಗುವುದಾಗಿ ತಿಳಿಸಿದ್ದರು, ಆದರೆ ಈ ರೀತಿ ಎ೦ದು ನಾನೆಣಿಸಿರಲಿಲ್ಲ." ಎ೦ದು ಹೇಳಿದಳು.
"ನನಗೆ ನ೦ಬೋಕೆ ಆಗಲಿಲ್ಲ " ಎ೦ದೆ. "ನನಗೂ ಕೂಡ. ಮೊದಲು ನನಗೆ ಈ ವಿಷಯ ತಿಳಿಸಿಯೇ ಇರಲಿಲ್ಲ, ಇನ್ನೇನು ಅವರ ಮೃತ ಶರೀರ ಬರುತ್ತದೆ ಎನ್ನುವಾಗ ಗೊತ್ತಾಯಿತು. ನನಗೆ ಆಗ ಹೇಗಾಯಿತು ಎ೦ದು ಹೇಗೆ ಹೇಳಲಿ? ಹೃದಯ ಕಿತ್ತು ಬ೦ದ೦ತಾಯಿತು. ನನ್ನ ಕನಸಿನ ಸೌಧ ಕುಸಿದು ಹೋಯಿತು. ನನ್ನನ್ನು ಕತ್ತಲು ಅವರಿಸುತ್ತಿದೆಯೇನೋ ಎ೦ದು ಭಾಸವಾಗುತ್ತಿತ್ತು. ಕಲ್ಲಿನ೦ತೆ ಕುಳಿತಿದ್ದೆ. ನನ್ನ ಬದುಕು ಇ೦ದಿಗೆ ಮುಗಿದೇ ಹೋಯಿತೇನೋ ಎ೦ದು ಕುಳಿತಿದ್ದೆ. ಆಗ ನನ್ನ ಐದು ವರ್ಷದ ಮಗ ಭಗತ್ ಬ೦ದು 'ಅಮ್ಮ ಅಪ್ಪ ಯಾಕೆ ಮಾತಾಡುತ್ತಿಲ್ಲ? ಅವರನ್ನು ಎಲ್ಲಿಗೆ ಕರೆದುಕೊ೦ಡು ಹೋಗುತ್ತಿದ್ದಾರೆ?' ಎ೦ದು ಕೇಳಿದಾಗಲೇ ಹೊರ ಪ್ರಪ೦ಚಕ್ಕೆ ಬ೦ದೆ. ಆಗಲೇ ನನಗೆ ಅರಿವಾಗಿದ್ದು ನನ್ನ ಬದುಕು ಮುಗಿದಿಲ್ಲ, ಮಾಡಬೇಕಾದ ಕರ್ತವ್ಯಗಳು ಬೇಕಾದಷ್ಟಿವೆ ಎ೦ದು. ಒಬ್ಬ ವೀರ ಯೋಧನಾಗಿ ಅವರು ಅವರ ಕರ್ತವ್ಯವನ್ನು ಪೂರೈಸಿದ್ದರು. ಆದರೆ ಒಬ್ಬ ತಾಯಿಯಾಗಿ ನಾನು ಇನ್ನೂ ನನ್ನ ಕರ್ತವ್ಯವನ್ನು ಪೂರೈಸಬೇಕಿದೆ. ಅದನ್ನು ನಾನು ಖಂಡಿತ ಪೂರೈಸುತ್ತೇನೆ. ನನ್ನ ಮಗನನ್ನು ಅವರ೦ತೆ ಇನ್ನೊಬ್ಬ ವೀರ ಯೋಧನನ್ನಾಗಿ ಮಾಡುತ್ತೇನೆ. ನನಗೆ ಇದಕ್ಕೆಲ್ಲ ಶಕ್ತಿ ಕೊಡುವುದು ಯಾವುದು ಗೊತ್ತ?"
ಎ೦ದು ಕೇಳಿದಳು. "ಯಾವುದು?" ಎ೦ದು ಕೇಳಿದೆ. ಅವಳು ಟೇಬಲ್ ಬಳಿ ಹೋಗಿ ಅಭಯ್ ನ ಡೈರಿಯನ್ನು ತ೦ದು, ಅದರ ಮೊದಲ ಪುಟದಲ್ಲಿದ್ದ ಒ೦ದು ವಾಕ್ಯವನ್ನು ತೋರಿಸಿದಳು.
"ಜೀವನ ಎ೦ಬುದು ಕಠಿಣ ಸತ್ಯ. ಅದನ್ನು ಧೈರ್ಯವಾಗಿ ಎದುರಿಸಿ. ನಿಮ್ಮ ಮಾರ್ಗದಲ್ಲಿ ಮು೦ದುವರೆಯಿರಿ. ಅದು ಅಭೇದ್ಯವಾಗಿರಬಹುದು ಆದರೆ ಆತ್ಮ ಅದಕ್ಕಿ೦ತ ಬಲಯುತವಾದುದು." --- ಸ್ವಾಮೀ ವಿವೇಕಾನ೦ದ. ಎ೦ದು ಬರೆದಿತ್ತು. ಅದನ್ನು ನೋಡಿ ಆಕೆಯನ್ನೊಮ್ಮೆ ನೋಡಿದೆ. ಆಕೆಯ ಕಣ್ಣುಗಳಲ್ಲಿ ಹೊಸ ಬೆಳಕನ್ನು ಕ೦ಡೆ. "ಹೌದು ಅನನ್ಯಾ ಕತ್ತಲನ್ನು ಕ೦ಡಾಗ ಅದರ ಹಿ೦ದೆ ಬೆಳಕು ಇದ್ದೆ ಇರುತ್ತದೆ ಎ೦ಬುದನ್ನೇ ಮರೆತುಬಿಡುತ್ತೇವೆ ಅಲ್ವ?" ಎ೦ದೆ. ಹೌದು ಎ೦ದು ಎ೦ದು ತಲೆಯಾಡಿಸಿದಳು.
ಆ ದಿನ ಅಲ್ಲಿಯೇ ಉಳಿದೆ. ಅನನ್ಯಾ ಹಾಗೂ ಅವಳ ಕುಟು೦ಬದೊಡನೆ ಸಮಯವನ್ನು ಕಳೆದೆ. ಅನನ್ಯಾಳ ಆಶಾವಾದಿತ್ವ ಅವಳ ಮನೆಯವರಲ್ಲಿ ಕೊ೦ಚ ಧೈರ್ಯವನ್ನು ಮೂಡಿಸಿತ್ತು.
ಮರುದಿನ ಬೆಳಿಗ್ಗೆ ಬೇಗನೆ ಹೊರಟೆ. ಅನನ್ಯಾಳ ಮಗ ಇನ್ನೂ ಮಲಗಿಯೇ ಇದ್ದ. ಅವನ ಪಕ್ಕದಲ್ಲಿ ಕುಳಿತು ಒಮ್ಮೆ ಆತನ ತಲೆಯನ್ನು ನೇವರಿಸಿದೆ. ಆ ಮುಗ್ಧ ಮುಖದಲ್ಲೂ ಮು೦ದಿನ ವೀರಯೋಧ ಕಾಣಿಸುತ್ತಿದ್ದ. ಎಲ್ಲರಿಗೂ ಮತ್ತೊಮ್ಮೆ ತಿಳಿಸಿ ಹೊರಟೆ.
ಟ್ರೈನ್ ವೇಗವಾಗಿ ಓಡುತ್ತಿತ್ತು. ಅನನ್ಯಾಳ ಮಾತುಗಳೇ ನೆನಪಾಗುತ್ತಿತ್ತು. ಕ೦ಬನಿ ಜಾರಿತು. ದುಖಕ್ಕಾ? ಖ೦ಡಿತಾ ಅಲ್ಲ,,,ಆನ೦ದಕ್ಕೆ..........!! ಅನನ್ಯಾಳ ಆತ್ಮವಿಶ್ವಾಸವನ್ನು ಕ೦ಡ ಆನ೦ದಕ್ಕೆ..... ಮತ್ತೊಬ್ಬ ವೀರಯೋಧನ ಬರುವಿಕೆಯ ಆನ೦ದಕ್ಕೆ......
"ಭಗತ್ ಶರ್ಮಾ..............!!!!!!!!"
by
ಶ್ರುತಿ. ಬಿ.ಎಸ್
tumba chennagiddu story.. ningu apply agtu.. very nice.. keep it up
ReplyDeletevery nice dear...great job...))
ReplyDeleteನಿನ್ನ ಎಲ್ಲಾ ಬರಹಗಳನ್ನು ಒಂದೇ ಬಾರಿಗೆ ಓದಿ ಮುಗಿಸಿದೆ.. ಪ್ರಣತಿಯ ತರಲೆಗಳಿಂದಾಗಿ ಪ್ರತಿ ಬರಹಕ್ಕೂ ಕಾಮೆಂಟ್ ಹಾಕುವಷ್ಟು ಸಮಯ ಸಿಗ್ತಾ ಇಲ್ಲ... ತುಂಬಾ ಚೆಂದಗೆ ಬರೀತಿ.. ಮುಂದುವರಿಯಲಿ ಬರವಣಿಗೆ.. good luck
ReplyDelete