Monday, September 5, 2011

SEAN SWARNER

                                                          ಶಾನ್ ಸ್ವಾರ್ನರ್ 
                                ಬದುಕು ಎಷ್ಟು  ವಿಚಿತ್ರ..?? ನಮ್ಮ  ಬದುಕಿನ ಈ ದಾರಿಯಲ್ಲಿ ಎಷ್ಟೋ ಜನ ಸಿಗುತ್ತಾರೆ. ಕೆಲವರು ಸಿಕ್ಕು ಹಾಗೆ ಹೊರಟು ಹೋಗುತ್ತಾರೆ. ಕೆಲವರು ನಮ್ಮೊಂದಿಗೆ ನಡೆಯುತ್ತಾರೆ. ಕೆಲವರು ನಮ್ಮೊಂದಿಗೆ ನಡೆಯದಿದ್ದರೂ ಅವರ ಛಾಯೆ ನಮ್ಮ ಕೊನೆಯವರೆಗೂ ಉಳಿಯುತ್ತದೆ. ಕೆಲವರು ನಮ್ಮೊಂದಿಗೆ ಸೇರಿ  ಬದಲಾಗುತ್ತಾರೆ. ಕೆಲವರು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ನಮ್ಮನ್ನೇ ಬದಲಾಯಿಸುತ್ತಾರೆ. ನನ್ನ ಬದುಕಿನಲ್ಲೂ ಹೀಗೆ ಬದಲಾವಣೆ ತಂದ ವ್ಯಕ್ತಿ ಎ೦ದರೆ ಶಾನ್......ಶಾನ್ ಸ್ವಾರ್ನರ್............!!!! 
                          ನಾನು ಶಾನ್ ನನ್ನು ಸ೦ಪರ್ಕಿಸಿದ್ದು ಈಗ ಒ೦ದು ವರ್ಷದ ಹಿ೦ದೆ.
 ಆತನ ಬಗ್ಗೆ ದಿನಪತ್ರಿಕೆಯೊಂದರಲ್ಲಿ ಓದಿ ಸ೦ಪರ್ಕಿಸಿದ್ದೆ. ಆದರೆ ಆತನಿಂದ ಪ್ರತಿಕ್ರಿಯೆ 
ಬರುತ್ತದೆ ಎ೦ಬ ಕಲ್ಪನೆ ಕೂಡ ಇರಲಿಲ್ಲ, ಅದಕ್ಕಾಗಿ ಕಾಯುತ್ತಲೂ  ಇರಲಿಲ್ಲ. ಆದರೆ ಸುಮಾರು 15 ದಿನಗಳ ನ೦ತರ ಆತನಿಂದ ಪ್ರತಿಕ್ರಿಯೆ ಬಂದಾಗ ನನ್ನ ಸ೦ತೋಷಕ್ಕೆ  ಪಾರವೇ ಇರಲಿಲ್ಲ. ಮರುಭೂಮಿಯಲ್ಲಿ ಮಳೆ ಬಂದಂತಾಗಿತ್ತು. ಉದ್ವೇಗದಿಂದ ಕಣ್ಣು ತುಂಬಿ ಬಂದಿತ್ತು. ಆತ ಬರೆದ ಸಾಲುಗಳಲ್ಲಿದ್ದ ಆತ್ಮೀಯತೆ, ಕಾಳಜಿ ನನಗೆ ಬಹು ಹಿಡಿಸಿದ್ದವು. ಆ ಸ೦ದರ್ಭದಲ್ಲಿ ನನಗೆ ಅದರ ಅವಶ್ಯಕತೆ ಕೂಡ ತುಂಬಾ ಇತ್ತು.  ಆ ನ೦ತರ ಈ ಒಂದು ವರ್ಷದಲ್ಲಿ ನಾನು ಸಂಪರ್ಕಿಸಿದ ಎಲ್ಲಾ ಸಲವೂ ಪ್ರತಿಕ್ರಿಯಿಸಿದ್ದಾನೆ..... ಸ್ವಲ್ಪ ತಡವಾಗಿಯಾದರೂ ಸರಿ  ಆತನಿಂದ ಪ್ರತಿಕ್ರಿಯೆ ಬ೦ದೆ ಬರುತ್ತದೆ. ಆತ್ಮೀಯತೆ, ಕಾಳಜಿ, ಪ್ರೀತಿ ಇನ್ನು ಹೆಚ್ಚಾಗಿದೆ. ಒಂದು ಹೊಸ ಸ೦ಬ೦ಧ ಬೆಸೆದುಕೊ೦ಡುಬಿಟ್ಟಿದೆ. ನಾನು ಎಲ್ಲೋ ಕೇಳಿದ್ದೆ, ಕೆಲವು ಸ೦ಬ೦ಧಗಳಿಗೆ ಹೆಸರು ಇರೋದಿಲ್ಲ ಎ೦ದು.ಈಗ ಅದು ನಿಜ ಅನಿಸುತ್ತಿದೆ.  ಆತನ ಜೀವನ ಪ್ರೀತಿ, ಜೀವನೋತ್ಸಾಹ, ಪ್ರಕೃತಿಯನ್ನು   ಪ್ರೀತಿಸುವ ಪರಿ ಇದೆಲ್ಲ ಅದ್ಭುತ. ಇದನ್ನೆಲ್ಲಾ ನೋಡಿದ ಮೇಲೆ ಆತನ ಮೇಲಿನ ಅಭಿಮಾನ ಇನ್ನೂ ಹೆಚ್ಚಾಗಿದೆ.
                          ಶಾನ್ ಬಗ್ಗೆ ಹಾಗು ಆತನ ಸಾಧನೆಗಳ ಬಗ್ಗೆ ನಾನಿಲ್ಲಿ ಹೇಳಲೇಬೇಕು. ಶಾನ್ ಎವರೆಸ್ಟ್ ನ್ನು ಏರಿದ ಏಕೈಕ ಕ್ಯಾನ್ಸರ್ ಸರ್ವೈವರ್. ಕೇವಲ ಎವರೆಸ್ಟ್ ಅಷ್ಟೇ ಅಲ್ಲದೆ ಏಳು ಖ೦ಡಗಳ ಏಳು ಅತಿ ಎತ್ತರದ ಪರ್ವತಗಳನ್ನು ಕೂಡ ಏರಿದ್ದಾನೆ. ಅದೂ ಕೂಡ ಸರಿಯಾಗಿ ಕೆಲಸ ಮಾಡುತ್ತಿರುವ ಒಂದೇ ಶ್ವಾಸಕೋಶವನ್ನು ಇಟ್ಟುಕೊ೦ಡು......!!!
                    ಹೌದು ಶಾನ್ ಗೆ  13 ವರ್ಷವಾಗಿದ್ದಾಗ ಹಾಡ್ ಕಿನ್ಸ್ ಡಿಸೀಸ್ ಉ೦ಟಾಗಿತ್ತು. ಹಾಡ್ ಕಿನ್ಸ್ ಡಿಸೀಸ್ ಮೊದಲು ಆಗುವುದು ಲಿ೦ಫ್ ನೋಡ್ಸ್ ಗಳಲ್ಲಿ. ನ೦ತರ ಲಿವರ್, ಸ್ಪ್ಲೀನ್, ಬೋನ್ ಮ್ಯಾರೋ ಗಳಿಗೆ ಪಸರಿಸುತ್ತದೆ.ಶಾನ್ ಗೆ ಹಾಡ್ ಕಿನ್ಸ್ ಡಿಸೀಸ್  4ನೇ  ಹ೦ತದಲ್ಲಿತ್ತು. ಡಾಕ್ಟರ್ ಗಳು ಯಾವುದೇ ಭರವಸೆ ನೀಡಿರಲಿಲ್ಲ. ಇದಾಗಿ ಸ್ವಲ್ಪವೇ ದಿನಗಳಲ್ಲಿ ಶಾನ್ ಗೆ ಆಸ್ಕಿನ್ಸ್ ಸಾರ್ಕೋಮ ಇದೆಯೆ೦ದು ಪತ್ತೆಯಾಯಿತು. ಶ್ವಾಸಕೋಶದಲ್ಲಿ ಸುಮಾರು ಗಾಲ್ಫ್ ಬಾಲಿನಷ್ಟು ದೊಡ್ಡ ಟ್ಯೂಮರ್ ನ್ನು ಶಸ್ತ್ರಚಿಕಿತ್ಸೆಯಿ೦ದ ತೆಗೆಯಲಾಯಿತು. ಡಾಕ್ಟರ್ ಇನ್ನು ಹೆಚ್ಚು ಎ೦ದರೆ 2 ವಾರ ಬದುಕಬಹುದು ಎ೦ದಿದ್ದರು. ಒಟ್ಟಾರೆ ಶಾನ್ ಸುಮಾರೆ ಒಂದೂವರೆ ತಿ೦ಗಳ  ಕಾಲ ಆಸ್ಪತ್ರೆಯಲ್ಲಿ ಅರೆಪ್ರಜ್ನಾವಸ್ಥೆಯಲ್ಲಿದ್ದನು. ಆದರೆ ಶಾನ್ ನ ಇಚ್ಛಾಶಕ್ತಿ, ಆತ್ಮವಿಶ್ವಾಸ ಆತನ ಕೈ ಹಿಡಿದವು. ಹಾಡ್ ಕಿನ್ಸ್ ಡಿಸೀಸ್ ಮತ್ತು ಆಸ್ಕಿನ್ಸ್ ಸಾರ್ಕೋಮಗಳ೦ತಹ ಡೆಡ್ಲಿ ಕ್ಯಾನ್ಸರ್ ಉ೦ಟಾಗಿಯೂ ಬದುಕುಳಿದ ಅಲ್ಲದೆ ಎವರೆಸ್ಟ್ ನ್ನು ಏರಿ ಜಗತ್ತಿನ ಅತಿ ಎತ್ತರದ ಸ್ಥಾನದಲ್ಲಿ  ನಿ೦ತ.
                                        
                                         ಇಷ್ಟೇ  ಅಲ್ಲದೇ 2001 ರಲ್ಲಿ ಕ್ಯಾನ್ಸರ್ ಕ್ಲೈ೦ಬರ್ ಅಸೋಸಿಯೇಶನ್(Cancer Climber Association) ನ್ನು  ಸ್ಥಾಪಿಸಿದ್ದಾನೆ. ಇದರ ಮೂಲಕ ಕ್ಯಾನ್ಸರ್ ಪೀಡಿತ ರೋಗಿಗಳ ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದಾನೆ ಮತ್ತು ಕ್ಯಾನ್ಸರ್ ಸರ್ವೈವರ್ ಗಳಿಗೆ ಆರೋಗ್ಯಪೂರ್ಣವಾಗಿ ಬದುಕುವುದನ್ನು ಹೇಳಿಕೊಡುತ್ತಿದ್ದಾನೆ. ಶಾನ್ ಗೆ 2007 ರಲ್ಲಿ  "ಡೋ೦ಟ್ ಎವರ್ ಗೀವ್ ಅಪ್(Don't ever give up)" ಪ್ರಶಸ್ತಿಯನ್ನು ಜಿಮ್ಮಿ.ವಿ. ಫೌ೦ಡೇಷನ್ ನಿ೦ದ ನೀಡಲಾಯಿತು. ಅಲ್ಲದೆ ಶಾನ್ ಅಕ್ಟೋಬರ್ 11, 2008 ರಲ್ಲಿ ಫೋರ್ಡ್ ಐರನ್ ಮ್ಯಾನ್ ವರ್ಲ್ಡ್ ಚಾಂಪಿಯನ್ ಶಿಪ್  ಗೆದ್ದಿದ್ದಾನೆ. ಮನುಷ್ಯ ಇಚ್ಛಾಶಕ್ತಿಯೊ೦ದಿದ್ದರೆ ಏನನ್ನು ಬೇಕಾದರೂ ಸಾಧಿಸಬಲ್ಲ ಎ೦ಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ.........??
                             ಆದರೆ ಈಗ್ಗೆ 15 ದಿನಗಳ ಹಿ೦ದೆ ಆತ ಬರೆದ  " ನನ್ನ ಬ್ಲಡ್ ರಿಪೋರ್ಟ್ ಬ೦ದಿದೆ...ನನ್ನ ಪಾಲಿಗೆ ಇನ್ನೂ ಒ೦ದು  ವರ್ಷವಿದೆ ಬದುಕಲು.... "  ಎ೦ಬ ಸಾಲುಗಳು ನನ್ನ ಕಣ್ಣ೦ಚಲ್ಲಿ  ನೀರು  ತರಿಸಿತ್ತು. ಇನ್ನೊ೦ದೆಡೆ ಹೆಮ್ಮೆಯೂ ಆಗುತ್ತಿತ್ತು. ಬಹುಶಃ ಜೀವನಪ್ರೀತಿ ಎ೦ದರೆ ಇದೇ ಇರಬೇಕು. ಬದುಕು ಎಷ್ಟೇ ಚಿಕ್ಕದಾಗಿರಲಿ ಅದನ್ನು ಮನಸ್ಪೂರ್ತಿಯಾಗಿ ಅನುಭವಿಸಬೇಕು. ಆಗಲೇ ಜೀವನ ಸಾರ್ಥಕ ಎನಿಸುವುದು. ಅದರಲ್ಲೂ ಇ೦ತಹ ಸ೦ದರ್ಭಗಳಲ್ಲಿ ಕಹಿಸತ್ಯವನ್ನು ಒಪ್ಪಿಕೊ೦ಡಾಗ  ಮಾತ್ರ ಆತ್ಮವಿಶ್ವಾಸದಿ೦ದ ಮು೦ದುವರೆಯಲು ಸಾಧ್ಯ. ಆತ್ಮವಿಶ್ವಾಸವೊ೦ದಿದ್ದರೆ  ಇಡೀ ಜಗತ್ತನ್ನೇ ಗೆಲ್ಲಬಹುದು.
                        ಇ೦ದು ನನ್ನಲ್ಲೂ ಸ್ವಲ್ಪ ಮಟ್ಟಿಗೆ ಆತ್ಮವಿಶ್ವಾಸ ಹೆಚ್ಚಿದೆ. ಕಾರಣ ಶಾನ್........!! ಹೌದು ಇ೦ದು ನನ್ನನ್ನು  ನಾನು ಪ್ರೀತಿಸಿಕೊಳ್ಳುತ್ತಾ ಇದ್ದೀನೆ೦ದರೆ, ನನ್ನ ಜೀವನವನ್ನು ಪ್ರೀತಿಸುತ್ತಿದ್ದೇನೆ೦ದರೆ  ನನ್ನಲ್ಲಿ ಸ್ವಲ್ಪವಾದರೂ ಬದಲಾವಣೆ ಬ೦ದಿದೆ ಎ೦ದರೆ ಅದಕ್ಕೆ ಕಾರಣ ಶಾನ್....   
      ಪರೋಕ್ಷವಾಗಿಯೇ  ಸರಿ ಆತನಿ೦ದ  ಬಹಳಷ್ಟನ್ನು ಪಡೆದುಕೊ೦ಡ ನಾನು ಆತನಿಗೆ ಏನನ್ನು ತಾನೇ ಕೊಡಬಲ್ಲೆ......??
     ಹು೦....ಆದರೆ ಇದೇ ಸೆಪ್ಟೆ೦ಬರ್  2  ರ೦ದು 38 ನೇ ವರ್ಷಕ್ಕೆ ಕಾಲಿಟ್ಟಿರುವ ಆತನಿಗೆ ಶುಭ ಹಾರೈಸಬಲ್ಲೆ. ದೇವರು ಆತನಿಗೆ ನೂರು ವರ್ಷ ಸ೦ತೋಷ, ಸುಖ, ಸಮೃದ್ಧಿ ತುಂಬಿರುವ ಜೀವನವನ್ನು ಕೊಡಲಿ ಎ೦ದು ಬೇಡಿಕೊಳ್ಳಬಲ್ಲೆ.                                      
            ನನ್ನ ಜೀವನದ ಪುಟಗಳಲ್ಲಿ  ಯಾವತ್ತು  ಅಳಿಸಲಾಗದ೦ತಹ ನಿನ್ನ  ಹೆಜ್ಜೆಯ ಗುರುತುಗಳನ್ನು ಮೂಡಿಸಿದ್ದಕ್ಕೆ   ಧನ್ಯವಾದಗಳು.............

                                  ವಿಶ್ ಯು ಹ್ಯಾಪಿ ಬರ್ತ್ ಡೇ ಶಾನ್...........ಲವ್ ಯು....................... :)


22 comments:

  1. hhuttu habbada shubhashayagalu sean(shan.... shruti avre.. nimagu kooda devaru nooru varsha sukha,santosha needali endu haraisttene.. shan bagga maahitigaagi dhanyavadagalu... neevella namage ROLE MODEl galiddante...

    dhanyavadagalu...

    ReplyDelete
  2. ಶಾನ್ ಬದುಕು ಎಲ್ಲರಿಗೂ ಪ್ರೇರಣೆಯಾಗುವಂಥದ್ದು... ಇಚ್ಛಾಶಕ್ತಿ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಈತನ ಬದುಕೇ ಸಾಕ್ಷಿ...

    ReplyDelete
  3. Love you shan :) liked u alot :) nice article dear

    ReplyDelete
  4. hapy bday shan nd sply thanks to u shruthi such a nice information.........

    ReplyDelete
  5. ಸ್ಪೂರ್ತಿ ಕೊಡುವಂಥಹ ಲೇಖನ..

    ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ... ಇನ್ನಷ್ಟು ಬರೆಯಿರಿ..

    ಪ್ರೀತಿಯಿಂದ

    ReplyDelete
  6. Oh. Wonderful personality.
    Thanks Shruthi. me too ur collegue.
    Pls convey my Belated B'Day wishes to Shan, Shruthi.
    Nice narration. Keep writing.
    With Love,
    Gubbachchi Sathish.

    ReplyDelete
  7. Really it is wonderful achievement by Shan. And it's a wonderful feeling just to know that about his struggling to achieve great.
    Thanks a Lot Shruti.

    ReplyDelete
  8. ಆತ್ಮವಿಶ್ವಾಸವಿದ್ದರೆ ಏನು ಬೇಕಾದರೂ ಸಾಧಿಸಬಹುದು...ಅವನು ಇನ್ನು ಉತ್ತುಂಗಕ್ಕೆರಲಿ ಎನ್ನುವದು ನನ್ನ ಆಶಯ.

    ReplyDelete
  9. ಎಲ್ಲವೂ ಚೆನ್ನಾಗಿದ್ದು, ಸಣ್ಣ ಪುಟ್ಟದಕ್ಕೆಲ್ಲ ಮನಸು ಕೆಡಿಸಿಕ್ಕೊಂಡು ಕುಸಿದು ಹೋಗುತ್ತಿರುವ, ಆತ್ಮವಿಶ್ವಾಸ ಕಳೆದುಕ್ಕೊಳುತ್ತಿರುವ ಮನಸುಗಳು ಈ ಲೇಖನವೊಮ್ಮೆ ಓದಲೇ ಬೇಕು...ನಿಮ್ಮ ಬ್ಲಾಗಿಗೊಮ್ಮೆ ಬರಲೇ ಬೇಕು..
    ಬಹಳ ಇಷ್ಟ ವಾಯ್ತು ನಿಮ್ಮ ಬರಹ..ಮತ್ತು ಶಾನ್ ವ್ಯಕ್ತಿತ್ವ ಮಾದರಿಯಾಗುವಂತದ್ದು..ಮತ್ತಷ್ಟು..ಮಗದಷ್ಟು ಲೇಖನಗಳು ನಿಮ್ಮಿಂದ ಬರಲಿ...
    ಪ್ರೀತಿಯಿಂದ...ಸುಷ್ಮಾ..

    ReplyDelete
  10. ಶೃತಿರಾವ್ ಅವರೆ,

    ಇದೇ ಮೊದಲ ಬಾರಿಗೆ ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟಿದ್ದು. ಒಂದು ಹೃದಯಪೂರ್ಣ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹ ಶಾನ್‌.. ಕುರಿತಾದ ಪರಿಚಯ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು.

    ಆತ್ಮವಿಶ್ವಾಸ ಎಲ್ಲರಲ್ಲಿಯೂ ಇದ್ದರೂ ಅದನ್ನು ಕಡೆಗಣಿಸಿಬಿಡುವುದು ಮನುಷ್ಯ ಸಹಜ ಸ್ವಭಾವ. ಅದನ್ನು ಇನ್ನಷ್ಟು ಗಟ್ಟಿಮಾಡಿಕೊಂಡು ಮುಂದುವರೆಯುವವರು ಬಹಳ ವಿರಳ ಮತ್ತು ಅಂಥವರ ಒಡನಾಟವೂ ಎಂತಹವನನ್ನೂ ಜೀವನವನ್ನು ಪ್ರೀತಿಸಲು ಪ್ರೇರೇಪಿಸುತ್ತದೆ.

    ಇನ್ನಷ್ಟು ಲೇಖನಗಳು ನಿಮ್ಮಿಂದ ಬರಲಿ.

    ReplyDelete
  11. ಶೃತಿ .. ನಿಮ್ಮ ಬರಹಗಳು ಇಷ್ಟವಾಯ್ತು. ಶಾನ್ ಅಂತಹ ವ್ಯಕ್ತಿಯ ಜೀವನಪ್ರೀತಿ ಎಲ್ಲರಿಗೂ ಸ್ಫೂರ್ತಿ ನೀಡುವಂತಹುದು .
    ಚಿಕ್ಕಪುಟ್ಟ ವಿಚಾರಗಳಿಗೆ ಕೊರಗುವ , ಆತ್ಮಹತ್ಯೆಗೇ ಮುಂದಾಗುವ ಯುವಜನತೆಗೆ ನಿಮ್ಮಂತವರ ಜೀವನಪ್ರೀತಿ , ದಿಟ್ಟತನ ಮಾದರಿಯಾಗಬೇಕು.

    ReplyDelete
  12. ಶ್ರುತಿ ಅವರೇ ನಿಮ್ಮ ಲೇಖನ ತುಂಬ ಆಪ್ತವಾಗಿದೆ, ನಿಮ್ಮ ಸ್ನೇಹಿತ ಶಾನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು....
    ಅಂದ ಹಾಗೆ Randy Pausch ಅವರ The Last Lecture ಪುಸ್ತಕವನ್ನು ಓದಿ...ತುಂಬ ಚೆನ್ನಾಗಿದೆ...ಈತ ಕಂಪ್ಯೂಟರ್ ವಿಜ್ಞಾನಿ ಮತ್ತು ಇವನಿಗೆ ಕೂಡ ಕ್ಯಾನ್ಸರ್ ತಗುಲಿತ್ತು..ಈ ಪುಸ್ತಕ ಅವರ ಒಂದು ಭಾಷಣ ಆಧಾರಿತ... ಶಾನ್ ಅವರ ಹಾಗೆ ಇದು ಕೂಡ ಎಂಥವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ....

    ReplyDelete
  13. ನನ್ನ ಈ ಲೇಖನವನ್ನು ಓದಿ ಕಮೆ೦ಟ್ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು..... ನಿಮ್ಮ ಈ ಪ್ರೋತ್ಸಾಹ ನನಗೆ ಸ್ಪೂರ್ತಿಯನ್ನು ನೀಡುತ್ತಿದೆ....ಎಲ್ಲರಿಗು ಧನ್ಯವಾದಗಳು.
    @ಗಿರೀಶ್ ನಾನು "ದಿ ಲಾಸ್ಟ್ ಲೆಕ್ಚರ್" ಪುಸ್ತಕವನ್ನು ಈಗಾಗಲೇ ಓದಿದ್ದೇನೆ...ಅದ್ಭುತವಾದ ವ್ಯಕ್ತಿ ಆತ........:)

    ReplyDelete
  14. ಶ್ರುತಿಜೀ... ನಾನು ಮೊದಲ ಸಲ ಇಲ್ಲಿಗೆ ಬಂದಿದ್ದೇನೆ.. ಬರಬರುತ್ತಲೇ ಸ್ಪೂರ್ತಿಯುತ ಲೇಖನವನ್ನು ನೀಡಿ ಸ್ವಾಗತಿಸಿದ್ದೀರಿ. ಆ ಪುಣ್ಯಾತ್ಮನ ಆತ್ಮವಿಶ್ವಾಸಕ್ಕೆ ನನ್ನದೊಂದು ಸಲಾಮ್..
    ಬರೆಯುತ್ತಿರಿ ,ಭಾವನೆಗಳ ಈ ನಿಮ್ಮ ಅಂಗಳಕೆ ನಿತ್ಯ ಭಾವದ ರಂಗೋಲಿ ಹಾಕುತ್ತಿರಿ..


    ಬನ್ನಿ ನಮ್ಮನೆಗೂ,

    http://chinmaysbhat.blogspot.com/

    ಇತಿ ನಿಮ್ಮನೆ ಹುಡುಗ ,
    ಚಿನ್ಮಯ ಭಟ್

    ReplyDelete
  15. ನೀವು ಹೇಳಿದ ಹಾಗೆ ಈ ಬದುಕು ವಿಚಿತ್ರನೇ! ನಿಮ್ಮ ಮೊದಲ ಪ್ಯಾರದ ಬರವಣಿಗೆ ನನಗೂ ಕೂಡ ಹೆಚ್ಚು ಅನ್ವೈಸುತ್ತೆ. ನಿಮ್ಮ ಬರಹಕ್ಕೆ ನನ್ನ ಶುಭಾಶಯಗಳು! ನೀವು ಅಚ್ಚರಿಯಾಗಿ ಬದುಕುತ್ತಿರ ಎಂದು ನನ್ನ ಅನಿಸಿಕೆ. ಧೈರ್ಯವಾಗಿರಿ! ಎಲ್ಲರ ಆಶೀರ್ವಾದ ಶಾನ್ ಮತ್ತು ನಿಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇನೆ. ಶುಭವಾಗಲಿ!

    ReplyDelete
  16. Super article... touchy too...double liked. Tumba ista aaytu. :) Keep writing.

    ReplyDelete
  17. Really Inspiring Article. Thanks Shruthi for this nice article. Hats off to both of you. Spoorthidayaka Lekhana. VandanegaLu. Nimmmondige navoo iddeve.

    ReplyDelete
  18. thanks for the article.. tumba ista aytu...

    ReplyDelete
  19. Shruthi,

    nimma lekhana oduttiddare helalaaradanthaha anubhoothi, tumbaa chennagide. nimma baravanigeyannu munduvaresi.

    ReplyDelete
  20. `ಶಾನ್ ಸ್ವಾರ್ನರ್'ನ೦ಥಾ ಅದ್ಭುತ ವ್ಯಕ್ತಿಯನ್ನು, ಆತನ ಸಾಧನೆಯನ್ನು ಪರಿಚಯಿಸಿದ ನಿಮಗೆ ಅನೇಕ ಧನ್ಯವಾದಗಳು ಶ್ರುತಿಯವರೇ, ನಿಮ್ಮ ನಿರೂಪಣಾ ಶೈಲಿಯ೦ತೂ ಬಹಳ ಇಷ್ಟವಾಯಿತು. ನಿಮ್ಮ ಲೇಖನ ಮಾರ್ಗದರ್ಶಕವಾಗಿದೆ. ಅಭಿನ೦ದನೆಗಳು.

    ReplyDelete
  21. ಉತ್ತಮ ಲೇಖನ ಶ್ರುತಿ ಅವರೇ .. ಶಾನ್ ಅವರ ಬಗ್ಗೆ ಅಮೂಲ್ಯ ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಈ ಲೇಖನ ತಡವಾಗಿ ಓದಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆಯಿರಲಿ. ಆ ಅಪ್ರತಿಮ ಸಾಧಕ ಶಾನ್ ಗೆ ದೇವರು ಇನ್ನೂ ಹೆಚ್ಚಿನ ಆಯುಷ್ಯ ನೀಡಲಿ ಎಂದು ಹಾರೈಸುತ್ತೇನೆ :-)

    ReplyDelete
  22. oh inspired..how wonderful. somepeople how they can manage to leave a mark..and on the contrary are we who find daily routines itself cumbersome.

    ReplyDelete